ಹೇರೂರು ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸಲು ಗ್ರಾಮಸ್ಥರ ಒತ್ತಾಯ
admincoorgdaily

ಮಡಿಕೇರಿ: ಹೇರೂರು ಗ್ರಾಮದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸುಮಾರು ೩೭.೬೫ ಎಕರೆ ಪ್ರದೇಶದಲ್ಲಿನ ಅಕ್ರಮ ಕಟ್ಟಡವನ್ನು ವಶಕ್ಕೆ ಪಡೆಯುವ ಜಿಲ್ಲಾಧಿಕಾರಿಗಳ ಕ್ರಮವನ್ನು ಬಿಜೆಪಿ ಯುವ ಮೋರ್ಚಾ ಮುಖಂಡ ಚಂದ್ರಶೇಖರ್ ಹೇರೂರು ಅವರು ಸ್ವಾಗತಿಸಿದ್ದಾರೆ.
ಸುಮಾರು ೩೮೦ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿರುವ ಹೇರೂರು ಹಾಡಿಗೆ ಮೂಲ ಆರೋಗ್ಯ ಸೌಲಭ್ಯ ಕೊರತೆಯಿದೆ. ಹೀಗಾಗಿ ವಶಪಡಿಸಿಕೊಂಡ ಕಟ್ಟಡವನ್ನು ಆಸ್ಪತ್ರೆಯಾಗಿ ಪರಿವರ್ತಿಸಿ, ತಿಂಗಳಿಗೊಮ್ಮೆ ಇಲಾಖಾ ಸಿಬ್ಬಂದಿ ಭೇಟಿ ನೀಡಿ ಸಮಸ್ಯೆ ಆಲಿಸಬೇಕು.
ಕಾಯಿಲೆ ಗುಣಪಡಿಸುವ ಆಮಿಷದಿಂದ ಮತಾಂತರ ನಡೆಯುತ್ತಿದ್ದು, ಮತಾಂತರಗೊಂಡವರ ಎಸ್‌ಟಿ ಸವಲತ್ತು ರದ್ದುಗೊಳಿಸಲು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಾಕೂರು ಶಿರಂಗಾಲ ಗ್ರಾ.ಪಂ ಮಾಜಿ ಅಧ್ಯಕ್ಷ ಜಗನ್ನಾಥ್, ಗ್ರಾಮಸ್ಥರಾದ ವಸಂತ, ಗಗನ್, ರಮೇಶ್, ಚರಣ್ ಇದ್ದರು.