ವಿರಾಜಪೇಟೆ; ಪಲ್ಲಾಟ್ ಅಯ್ಯಪ್ಪ ದೇವರ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

Apr 26, 2026 - 15:41
 0  73
ವಿರಾಜಪೇಟೆ; ಪಲ್ಲಾಟ್ ಅಯ್ಯಪ್ಪ ದೇವರ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ;ನೆಹರು ನಗರದಲ್ಲಿ ನಡೆಯುತ್ತಿರುವ, ಶ್ರೀ ಪಲ್ಲಾಟ್ ಅಯ್ಯಪ್ಪ ದೇವರ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶ್ರೀದೇವರಿಗೆ ವಿಶೇಷ ಪೂಜೆ ಅರ್ಪಿಸಿದರು.

ಪ್ರತಿಷ್ಠಾ ಬ್ರಹ್ಮಕಲಶದ ಸಂದರ್ಭ, ನಾಡಿನ ಸುಭಿಕ್ಷೆ ಹಾಗೂ ಒಳಿತಿಗಾಗಿ ಪ್ರಾರ್ಥಿಸಿದ ಮಾನ್ಯ ಶಾಸಕರು, ಭಕ್ತಾದಿಗಳಿಗೆ ಹಾಗೂ ನಾಡಿನ ಎಲ್ಲ ಜನತೆಗೆ ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.

 ನೂತನ ರಸ್ತೆ ಲೋಕಾರ್ಪಣೆ; ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರ ಅನುದಾನದ ₹ 14 ಲಕ್ಷಗಳಲ್ಲಿ, ಶ್ರೀ ದೇವರ ಸನ್ನಿಧಿಗೆ ತೆರಳುವ ರಸ್ತೆ ಕಾಮಗಾರಿ ಕೈಗೊಂಡಿದ್ದು, ಇದೀಗ ಪೂರ್ಣಗೊಂಡ ಕಾಮಗಾರಿಯ ಬಳಿಕ ಸಾರ್ವಜನಿಕರ ಹಾಗೂ ಭಕ್ತಾದಿಗಳ ಬಳಕೆಗೆ ಈ ನೂತನ ರಸ್ತೆಯನ್ನು ಮಾನ್ಯ ಶಾಸಕರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಪಲ್ಲಾಟ್ ಅಯ್ಯಪ್ಪ ದೇವಸ್ಥಾನ ಅಧ್ಯಕ್ಷರು ಚನ್ನಪ್ಪ, ಮಾಜಿ ಪುರಾಸಭೆ ಅಧ್ಯಕ್ಷರು ರಾಫಿ, ಸಂತೋಷ್, ಕಾಳಮಾಂಡ ಜಗತ್, ಅಪ್ಪಣ್ಣ, ಪುರಸಭೆ ಮುಖ್ಯಧಿಕಾರಿಗಳು ನಾಚಪ್ಪ, ನಯಾಜ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0