ವಿರಾಜಪೇಟೆ; ತುಳಸಿ ಮಾರಿಯಮ್ಮ ದೇವಸ್ಥಾನಕ್ಕೆ ಶಾಸಕ ಎಎಸ್ ಪೊನ್ನಣ್ಣ ಭೇಟಿ

May 3, 2026 - 16:49
 0  216
ವಿರಾಜಪೇಟೆ; ತುಳಸಿ ಮಾರಿಯಮ್ಮ ದೇವಸ್ಥಾನಕ್ಕೆ ಶಾಸಕ ಎಎಸ್ ಪೊನ್ನಣ್ಣ ಭೇಟಿ

ವಿರಾಜಪೇಟೆ; ತುಳಸಿ ಮಾರಿಯಮ್ಮ ದೇವಸ್ಥಾನಕ್ಕೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ  ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಭೇಟಿ ನೀಡಿದರು.ಸ್ಥಳೀಯರ ಆರಾಧ್ಯ ದೇವಿ ಶ್ರೀ ತುಳಸಿ ಮಾರಿಯಮ್ಮ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿದೆ.

 ದೇವಸ್ಥಾನದ ಹಕ್ಕು ಪತ್ರ ಹಸ್ತಾಂತರ: ಪುರಾತನವಾದ ದೇವಾಲಯಕ್ಕೆ ಈ ಹಿಂದೆ ಹಕ್ಕು ಪತ್ರ ಇಲ್ಲದೆ ಯಾವುದೇ ರೀತಿಯ ದಾಖಲೆಗಳನ್ನು ಸೃಷ್ಟಿಸಲು ಅಸಾಧ್ಯವಾಗಿತ್ತು. ಈ ವಿಷಯವನ್ನು ಕಳೆದ ಸಾಲಿನಲ್ಲಿ ಶಾಸಕರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದರು.

 ಆ ಸಂದರ್ಭದಲ್ಲಿ ಮಾನ್ಯ ಶಾಸಕರು ತಾನು ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಪ್ರಕಾರ ಇಂದು ದೇವಸ್ಥಾನಕ್ಕೆ ಅಧಿಕೃತ ಹಕ್ಕು ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ರಂಜಿ ಪೂಣಚ್ಚ, ತುಳಸಿ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರು ಮುರುಗ, ಉಪಾಧ್ಯಕ್ಷರು,ಆಡಳಿತ ಮಂಡಳಿ,ಪುರಸಭೆ ಮಾಜಿ ಅಧ್ಯಕ್ಷರು ದೇಚಮ್ಮ ಕಾಳಪ್ಪ, ಮಾಜಿ ಸದಸ್ಯರು ರಾಜೇಶ್ ಪದ್ಮನಾಭ, ರಾಫಿ, ಮತೀನ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ಶಬೀರ್, ಪಕ್ಷದ ಮುಖಂಡರು ಮಹಾದೇವ, ಮಂಜುನಾಥ್, ನಯಾಜ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0