ವಿರಾಜಪೇಟೆ: ರಸ್ತೆ ಬದಿಯಲ್ಲಿ ಕಸ ಹಾಕಿದ ವ್ಯಕ್ತಿಗೆ ಬಿತ್ತು 1000 ಸಾವಿರ ರೂ ದಂಡ
admincoorgdaily
ಕಸ ದಂಡ: ನುಡಿದಂತೆ ನಡೆದ ಪುರಸಭೆ: ಕಸ ಎಸೆಯುವ ಯತ್ನಕ್ಕೆ 1000 ರೂ ದಂಡ ವಿರಾಜಪೇಟೆ:ಪುರಸಭೆ ಇತ್ತೀಚೆಗಷ್ಟೇ ಕ್ಲೀನ್ ವಿರಾಜಪೇಟೆ ಎಂಬ ಫೇಸ್ ಬುಕ್ ಖಾತೆ ಬಿಡುಗಡೆಗೊಳಿಸಿ,ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಕಸ ಹಾಕುವವರ ಭಾವ ಚಿತ್ರ ತೆಗೆದು ಕಳುಹಿಸಿದವರಿಗೆ 100 ರೂ ಬಹುಮಾನ ಎಂದು ಘೋಷಿಸಿತು.ಇದೀಗ ರಸ್ತೆ ಬದಿಯಲ್ಲಿ ಕಸ ಹಾಕಿದ ವ್ಯಕ್ತಿಯೋರ್ವರಿಗೆ ಮಂಗಳವಾರ ದಂಡ ವಿಧಿಸಿರುವ ಘಟನೆ ನಡೆದಿದೆ.
ಪುರಸಭೆಯು "ಕಸ ಮುಕ್ತ ನಗರದ ಪರಿಕಲ್ಪನೆ "ಕಸ ಎಲ್ಲೆಂದರಲ್ಲಿ ಹಾಕುವ ವ್ಯಕ್ತಿಗಳ ಚಿತ್ರ ಕಳುಹಿಸಿ ಬಹುಮಾನ ಗೆಲ್ಲಿರಿ ಎಂಬ ಸಂದೇಶದೊಂದಿಗೆ, ವಿನೂತನ ಆದೇಶ ತಾ. 15 ರಂದು ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಕ್ಕೆ ಅದ್ಯಕ್ಷರು ಹಾಗೂ ಸದಸ್ಯರು ಒಕ್ಕೊರಲಿನಿಂದ ಕಸ ಎಸೆಯುವವರಿಗೆ ದಂಡ ಪ್ರಯೋಗ ಮಾಡುವಂತೆ ನಿರ್ಣಯ ಕೈಗೊಂಡಿದ್ದರು. ಪುರಸಭೆಯು ಹಲವಾರು ಬಾರಿ ಕಸ,ತ್ಯಾಜ್ಯ ದ ಬಗ್ಗೆ ಮಾಹಿತಿ ನೀಡಿದರು ಕೂಡ ಮಾಹಿತಿ ಅರಿತು ಅರಿಯದಂತಿರುವ ಅನಾಗರಿಕರು ಕಸ ತ್ಯಾಜ್ಯವನ್ನು ನಿರ್ದಿಷ್ಟ ಸಮಯದಲ್ಲಿ ನೀಡಲು ವಿಫಲರಾಗಿರುವುದು ವಿಪರ್ಯಾಸ.
ಮಂಗಳವಾರ ಬೆಳಗ್ಗೆ ಕಸ ವಾಹನ ಮಾರ್ಗದಲ್ಲಿ ಬಂದು ತೆರಳಿದ್ದು ನಂತರ ಮನೆಯ ಕಸ ತ್ಯಾಜ್ಯ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿ ಎಸೆಯಲು ಬಂದ ವ್ಯಕ್ತಿಯ ಚಿತ್ರವನ್ನು ಪುರಸಭೆಯು ಹೊಂದಿರುವ ಸಾಮಾಜಿಕ ಜಾಲತಾಣದ ಪೇಜ್ ನಲ್ಲಿ ಹಾಕಿದ್ದಾರೆ. ಪ್ರತಿಕ್ರಿಯೆ ವ್ಯಕ್ತವಾಗಿ ಪುರಸಭೆಯು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಸ ಹಾಕಲು ಬಂದ ವ್ಯಕ್ತಿಯ ಮೇಲೆ ರೂ 1000 ರೂ ದಂಡ ವಿಧಿಸೊದೆ. ಪುರಸಭೆ ಈ ಪ್ರಯತ್ನಕ್ಕೆ ನಗರ ನಾಗರಿಕರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವರದಿ: ಕಿಶೋರ್ ಕುಮಾರ್ ಶೆಟ್ಟಿ