ವಿರಾಜಪೇಟೆ ರಾಜಸ್ಥಾನ್ ವಿಷ್ಣು ಸಮಾಜ್ ವಿರಾಜಪೇಟೆ ವತಿಯಿಂದ 4 ನೇ ವರ್ಷದ ವಿಜಯದಶಮಿ ಆಚರಣೆ

ವಿರಾಜಪೇಟೆ ರಾಜಸ್ಥಾನ್ ವಿಷ್ಣು ಸಮಾಜ್ ವಿರಾಜಪೇಟೆ ವತಿಯಿಂದ 4 ನೇ ವರ್ಷದ ವಿಜಯದಶಮಿ ಆಚರಣೆ

ವಿರಾಜಪೇಟೆ:ನವರಾತ್ರಿಗಳ ದಿನದಂದು ಶ್ರೀ ದುರ್ಗಾದೇವಿಯನ್ನು ಜಾನಪದ ಶೈಲಿಯ ಗರ್ಭಾ ನೃತ್ಯದ ಮೂಲಕ ಪೂಜಿಸುವ ಮತ್ತು ಆರಾಧಿಸಿ ವಿಜಯದಶಮಿ ಹಬ್ಬವನ್ನು ಸಾಂಪ್ರದಾಯಕವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

 ರಾಜಸ್ಥಾನ್ ವಿಷ್ಣು ಸಮಾಜ್ ವಿರಾಜಪೇಟೆ ವತಿಯಿಂದ 4 ನೇ ವರ್ಷದ ವಿಜಯದಶಮಿ ನವರಾತ್ರಿ ಹಬ್ಬದ ಆಚರಣೆಯನ್ನು ನಗರದ ಕಾವೇರಿ ಕಲ್ಯಾಣ ಮಂಟಪ ದಲ್ಲಿ ನವ ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಸಮಾಜ ಬಾಂಧವರು ನವ ದಿನಗಳ ಕಠಿಣ ವೃತವನ್ನು ಆಚರಿಸಿ ವಿಜಯದಶಮಿಯ ಕೊನೆ ದಿನ ಉಪವಾಸ ವೃತ ಆಚರಿಸಿದ ವ್ಯಕ್ತಿಗಳಿಗೆ ಗೌರವ ಸಲ್ಲಿಸುವುದರೊಂದಿಗೆ ಆಚರಣೆ ಮಾಡಿದರು.

ರಾಜಸ್ಥಾನ ಜನಪದ ಸಾಹಿತ್ಯ ಮತ್ತು ದುರ್ಗಾದೇವಿಯನ್ನು ಗರ್ಭಾ ನೃತ್ಯದ ಮೂಲಕ ಪ್ರದರ್ಶನ ಮಾಡಿ ದೇವಿಯ ಪೌರಾಣಿಕ ಕಥೆಗಳನ್ನು ಹಾಡಿನ ಮೂಲಕ ಭಿತ್ತರಿಸುತ್ತಿರುವುದು ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ ಎಂದು ಹಿರಿಯರಾದ ಚೇಲರಾಂ ಅವರು ಹೇಳಿದರು ಧಾಂಡಿಯಾ (ಕೋಲಾಟ) ಮೂಲಕ ಪುರುಷರು, ಮಹಿಳೆಯರು, ಮಕ್ಕಳು ಸಹ ಗರ್ಭಾ ನೃತ್ಯದಲ್ಲಿ ಪಾಲ್ಗೊಂಡು ತಮ್ಮ ಸಾಂಪ್ರದಾಯಿಕ ಧೀಮಂತ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವುದು ಸನಾತನ ಧರ್ಮಕ್ಕೆ ನೀಡಿರುವ ಕೊಡುಗೆಯಾಗಿದೆ.

 ನವ ರಾತ್ರಿ ಉತ್ಸವದಲ್ಲಿ ರಾತ್ರಿ 08 ರ ವೇಳೆಗೆ ದುರ್ಗಾದೇವಿಗೆ ಭಜನೆ,ದೇವಿಯ ಕೀರ್ತನೆ ಮತ್ತು ಮಾಹಪೂಜೆ,ನಂತರ ಗರ್ಭಾನೃತ್ಯ, ಬಳಿಕ ನವ ನವೀನ ಸಿಹಿ. ಮತ್ತು ರಾಜಸ್ಥಾನ ರಾಜ್ಯದ ವಿಶೇಷ ಖಾದ್ಯಗಳ ಸಮೂಹಿಕ ಸಸ್ಯಹಾರಿ ಭೋಜನದೊಂದಿಗೆ ದಿನವು ಅಂತ್ಯ. ಹೀಗೆ ನವ ದಿನಗಳ ಆಚರಣೆ ನಡೆಯಿತು. ಮಹೇಂದ್ರ ರಾಜ್ ಪುರೋಹಿತ್ ಅವರು ದೇವಿ ದುರ್ಗಾದೇವಿಯ ವೇಷಾಭರಣ ತೊಟ್ಟು ನೃತ್ಯ ಪ್ರದರ್ಶನ ಮಾಡಿದರು. ರಾಜಸ್ಥಾನ್ ವಿಷ್ಣು ಸಮಾಜ್ ವಿರಾಜಪೇಟೆ ಪ್ರಮುಖರಾದ ಚೇಲಾರಾಂ,ಮಧನ್,ನಪ್ರತ್ ಸಿಂಗ್,ಪಾರಸ್ ಮಲ್, ಸೇರಿದಂತೆ ರಾಜಸ್ಥಾನ್ ಸಮಾಜದ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವರದಿ: ಕಿಶೋರ್ ಕುಮಾರ್ ಶೆಟ್ಟಿ