ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಯುವಕ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ ಅವರ ಮೇಲೆ ಹಲ್ಲೆ ಪ್ರಕರಣ:ಮೂವರು ಮಹಿಳೆಯರು ಸೇರಿ ಐವರ ಮೇಲೆ ಪ್ರಕರಣ ದಾಖಲು
ಮಡಿಕೇರಿ:ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ ಅವರ ಮೇಲೆ ಮಸೀದಿ ಹಾಗೂ ಅಂಗನವಾಡಿ ಜಾಗಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ವಿಷಯದಲ್ಲಿ ಚಾಮಿಯಾಲದ ಐವರು ಮೇಲೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ BNS 2023, (U\s109,352,351(3),54r\w3(5) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಚಾಮಿಯಾಲದ ಇಸ್ಮಾಯಿಲ್, ತನ್ಸೀಯಾ, ಸಫ್ರಿಯಾ,ಸಮ್ರಿಯಾ ಹಾಗೂ ಇರ್ಷಾದ್ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಂಪೂರ್ಣ ವಿವರ:
ದಿನಾಂಕ 01-10-2025 ರಂದು ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ,ಸೈಫುದ್ದೀನ್ ಚಾಮಿಯಾಲ ಅವರು ನೀಡಿರುವ ದೂರಿನಲ್ಲಿ, ನಮ್ಮ ಮನೆತನದವಾರದ ಕುವಲೇರ ಕುಟಂಬದವರು ಹಲವಾರು ವರ್ಷಗಳಿಂದ ಅಂಗನವಾಡಿ ಮತ್ತು ಮಸೀದಿಗೆ ಒಂದು ಎಕರೆ ಜಾಗವನ್ನು ದಾನವಾಗಿ ಕೊಟ್ಟಿರುತ್ತಾರೆ. ಈ ಜಾಗವು ಕುಟುಂಬದ ಪಟ್ಟೆದಾರರಾದ ಅಹಮ್ಮದ್ ರವರ ಹೆಸರಿನಲಿರುತ್ತದೆ. ಆದರೆ ನಮ್ಮ ಮನೆತನದವರಾದ ಇಸ್ಮಾಯಿಲ್ ರವರು ಈ ಜಾಗವು ತಮಗೆ ಸೇರಬೇಕೆಂದು ಹೇಳಿಕೊಂಡು ತಿರುಗುತ್ತಿದ್ದರು. ಆದರೆ ಈ ಜಾಗಕ್ಕೆ ಬೇಲಿಯನ್ನು ಹಾಕಿರಲಿಲ್ಲ.
1-10-2025ರಂದು ಮೇಲ್ಕಂಡ ಜಾಗಕ್ಕೆ ಬೇಲಿಯನ್ನು ಹಾಕಿ ಹದ್ದು ಬಸ್ತು ಮಾಡಲು ಜಮಾಅತ್ ಕಮಿಟಿಯವರು ಹಾಗೂ ಗ್ರಾಮಸ್ಥರು ತೀರ್ಮಾನಿಸಿದ್ದು ನಾನು ನನ್ನೊಂದಿಗೆ ಜಮಾಅತ್ ಅಧ್ಯಕ್ಷರು ಹಾಗೂ ಇತರ ಗ್ರಾಮಸ್ಥರು ಮತ್ತು ಪಟ್ಟಿದಾರರ ಮಕ್ಕಳು ಹೋಗಿ ಎಲ್ಲರೂ ಸೇರಿ ಜಾಗದಲ್ಲಿ ಕಾಡು ಕಡಿದು ಸ್ವಚ್ಛಗೊಳಿಸಿ ಬೇಲಿ ಕಂಬಗಗಳನ್ನು ಹಾಕುತ್ತಿದ್ದಾಗ ಸಮಯ ಬೆಳಿಗ್ಗೆ, 09-30 ಗಂಟೆಗ ಸ್ಥಳಕ್ಕೆ ಬಂದು ಇಸ್ಮಾಯಿಲ್ ಹಾಗೂ ಅವರ ಹೆಣ್ಣು ಮಕ್ಕಳಾದ ತನ್ಸೀಯಾ,ಸಫರಿಯಾ,ಸಮರಿಯಾ ಮತ್ತು ಇಸ್ಮಾಯಿಲ್ ಅವರ ಅಳಿಯ ಇರ್ಷಾದ್ ರವರು ಸ್ಥಳಕ್ಕೆ ಬಂದು, ಇಸ್ಮಾಯಿಲ್ ಅವರು ನಮ್ಮನ್ನು ಕುರಿತು ಈ ಜಾಗವು ನಮಗೆ ಸೇರಬೇಕು ನೀವು ಇಲ್ಲಿಂದ ದಾಟಿ ಎಂದು ಹೇಳಿ, ಸೂ.... ಮಕ್ಕಳೇ ಇಲ್ಲಂದ ಹೋಗದಿದ್ದರೆ ನಿಮ್ಮನ್ನೆಲ್ಲಾ ಸುಮ್ಮನೆ ಬಿಡುವುದಿಲ್ಲ, ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದರು.
ನಾನು ಹಾಗೂ ಇತರರು ಈಗ ಜಾಗ ಮಸೀದಿಗೆ ಸೇರಿದ್ದು ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಹೇಳಿದಾಗ ಇಸ್ಮಾಯಿಲ್ ತನ್ನ ಮಗಳು ತನ್ಸೀಯಾಳಿಗೆ ನನ್ನನ್ನು ತೋರಿಸಿ ಈ ನಾಯಿಯನ್ನು ಸುಮ್ಮನೆ ಬಿಡಬೇಡ,ಕತ್ತಿಯಿಂದ ಕಡಿದು ಸಾಯಿಸು ಎಂದು ಹೇಳಿದಾಗ ತನ್ಸಿಯಾಳು ತನ್ನ ಕೈಯಲ್ಲಿದ್ದ ಕತ್ತಿಯಿಂದ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆಯ ಭಾಗಕ್ಕೆ ಬಿಸಿದಾಗ ನನ್ನ ಎಡಗೈಯನ್ನು ಆಡ್ಡ ಹಿಡಿದಾಗ ಕತ್ತಿಯೇಟು ನನ್ನ ಎಡ ಮೊಣಕೈಗೆ ತಾಗಿ ರಕ್ತ ಗಾಯವಾಯಿತು.
ಮತ್ತೆ ಆಕೆಯು ಕತ್ತಿಯನ್ನು ಬೀಸಿದಾಗ ಕತ್ತಿ ಏಟು ನನ್ನ ಬಲ ಬೆನ್ನಿಗೆ ತಾಗಿ ರಕ್ತಗಾಯವಾಗಿರುತ್ತದೆ. ನಂತರ ಅಲ್ಲಿ ಕೆಲಸ ಮಾಡುತ್ತಿರುವವರು ಬಂದು ತಡೆದಾಗ ಕತ್ತಿಯನ್ನು ಅಲ್ಲಿಯೇ ಹಾಕಿ ಎಲ್ಲರೂ ಸ್ಥಳದಿಂದ ಹೋಗಿರುತ್ತಾರೆ. ನನ್ನನ್ನು ನನ್ನ ಅಣ್ಣ ಶಿಯಾಜ್ ಹಾಗೂ ಅಶ್ಫಾಕ್ ಸೇರಿ ಚಿಕಿತ್ಸೆ ಬಗ್ಗೆ, ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಆದ್ದರಿಂದ ಚಾಮಿಯಾಲ ಜಮಾಅತ್ ಹಾಗೂ ಅಂಗನವಾಡಿಗೆ ಸೇರಿದ ಜಾಗದ ವಿಚಾರದಲ್ಲಿ, ವೈಷಮ್ಯ ಇಟ್ಟುಕೊಂಡು ಅವಾಚ್ಯ ಪದಗಳಿಂದ ನಿಂದಿಸಿ ಕತ್ತಿಯಿಂದ ಕಡಿದು ಕೊಲೆಮಾಡಲು ಪ್ರಯತ್ನಿಸಿದ ಹಾಗೂ ನನ್ನ ಮೇಲೆ ಕತ್ತಿಯಿಂದ ಕಡಿಯುವಂತೆ ಕುಮ್ಮಕ್ಕು, ನೀಡಿದ ಈ ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.