ವಿರಾಜಪೇಟೆ:ಗೌರಿ-ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕ‌ ಎ‌ಎಸ್ ಪೊನ್ನಣ್ಣ ಅವರಿಗೆ ಸನ್ಮಾನ

ವಿರಾಜಪೇಟೆ:ಗೌರಿ-ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕ‌ ಎ‌ಎಸ್ ಪೊನ್ನಣ್ಣ ಅವರಿಗೆ ಸನ್ಮಾನ

ವಿರಾಜಪೇಟೆ:ಇಲ್ಲಿನ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗೌರಿ ಗಣೇಶ ಉತ್ಸವ ಸಮಿತಿಯವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಶಾಸಕರು, ವಿಘ್ನನಿವಾರಕ ಗಣೇಶನು, ನಾಡಿಗೆ ಒಳಿತನ್ನು ಆಶೀರ್ವದಿಸಲಿ ಎಂದು ಪ್ರಾರ್ಥಿಸಿದರು. ಅತ್ಯಂತ ವಿಜ್ಯಂಬಣೆಯಿಂದ ಆಚರಿಸಲ್ಪಡುತ್ತಿರುವ ಗಣೇಶ ಹಬ್ಬವು ಜನರಲ್ಲಿ ಸೌಹಾರ್ದತೆಯ ಸಂದೇಶವನ್ನು ಸಾರುವಂಥ ಆಗಲಿ ಎಂದು ಕರೆ ನೀಡಿದರು.