ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ವ್ಯಾಪಾಕ ಬೆಂಬಲ: ಬೀದಿಗಿಳಿದ ರೈತರು,ರಸ್ತೆತಡೆ ನಡೆಸಿ ಪ್ರತಿಭಟನೆ

ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ವ್ಯಾಪಾಕ ಬೆಂಬಲ: ಬೀದಿಗಿಳಿದ ರೈತರು,ರಸ್ತೆತಡೆ ನಡೆಸಿ ಪ್ರತಿಭಟನೆ

ಸೋಮವಾರಪೇಟೆ:-ಸಿ&ಡಿ ಭೂ ವಿವಾದ ಸೋಮವಾರಪೇಟೆ ತಾಲೂಕು ಸ್ತಬ್ಧವಾಗಿದ್ದು,ಬೀದಿಗಿಳಿದ ರೈತರು,ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು,ಸ್ಥಳಕ್ಕೆ ಡಿ.ಸಿಹಾಗೂ,ಸಿ.ಸಿ. ಎಫ್ ಸ್ಥಳಕ್ಕೆ ಬರಲು ಪಟ್ಟು ಹಿಡಿದಿದ್ದಾರೆ. ಸಿ&ಡಿ ಭೂವಿವಾದಕ್ಕೆ ಸಂಬಂಧಿಸಿದಂತೆ ತಾಲೂಕು ರೈತ ಹೋರಾಟ ಸಮಿತಿ ಹಾಗೂ ರೈತ ಸಂಘ ಕರೆನೀಡಿದ್ದ ತಾಲೂಕು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಗ್ರಾಮೀಣ ಭಾಗಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರಕಡಿದು ಹಾಕಿ ಸಂಚಾರ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದು,ವಾಹನ ಸಂಚಾರವಿಲ್ಲದೆ ಜನಸಾಮಾನ್ಯರು ಪಟ್ಟಣಕ್ಕೆ ಆಗಮಿಸದಿದರಿಂದ ಸರ್ಕಾರಿ ಖಚೇರಿಗಳೆಲ್ಲಾ ಬಿಕೋ ಎನ್ನುತ್ತಿತ್ತು. ಪಟ್ಟಣದ ಚನ್ನಬಸಪ್ಪ ಸಭಾಂಗಣ,ಎಸ್.ಜಿ.ಎಂ ಬಾಲಿಕಾ ಪ್ರೌಢ ಶಾಲೆ ಹಾಗೂ ವಿವೇಕಾನಂದ ವೃತ್ತದ ಬಳಿ ರಸ್ತೆ ತಡೆ ನಡೆಸಿದರು. ವಿವೇಕಾನಂದ ವೃತ್ತದ ಬಳಿ ನೂರಾರು ಸಂಖ್ಯೆಯಲ್ಲಿ ಸೇರಿದ ರೈತರು ಭಾರಿ ಪ್ರತಿಭಟನೆನಡೆಸಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೃಷ್ಣಮೂರ್ತಿ ಹಾಗೂ ರೇಂಜರ್ ಶೈಲೇಂದ್ರ ರವರನ್ನ ಸುತ್ತುವರೆದ ರೈತರು ಸಿ&ಡಿ ಭೂವಿವಾದಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಹಾಗೂ ಅಧಿವೇಶನ ನಡೆಯುತ್ತಿರುವುದರಿಂದ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಅಲ್ಲಿಯವರೆಗೂ ಸ್ಥಳಬಿಟ್ಟು ಕದಲುವುದಿಲ್ಲ ವೆಂದು ಪಟ್ಟುಹಿಡಿದರು.