ಸೋಮವಾರಪೇಟೆ ತಾಲ್ಲೂಕ್ ಬಂದ್ ಗೆ ವ್ಯಾಪಾಕ ಬೆಂಬಲ: ವಾಹನಗಳನ್ನು ತಡೆದ ಹೋರಾಟಗಾರರು!
ಸೋಮವಾರಪೇಟೆ: ತಾಲ್ಲೂಕಿನಲ್ಲಿ ಸಿ&ಡಿ ಕೃಷಿ ಭೂಮಿಗೆ ವಿವಾದಕ್ಕೆ ಸಂಬಂಧಿಸಿದಂತೆ ರೈತ ಪರ ಸಂಘಟನೆಗಳು ಕರೆಕೊಟ್ಟಿರುವ ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ವ್ಯಾಪಾಕ ಬೆಂಬಲ ವ್ಯಕ್ತವಾಗಿದ್ದು,ಸ್ವಯಂಪ್ರೇರಿತವಾಗಿ ವರ್ತಕರು ಅಂಗಡಿ-ಮುಂಗ್ಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದಾರೆ. ಆದರೆ ರೈತಪರ ಹೋರಾಟಗಾರರು ಬಲವಂತವಾಗಿ ರಸ್ತೆಗಳಿಗೆ ಅಡ್ಡವಾಗಿ ಮರಗಳನ್ನಿಟ್ಟು ರಸ್ತೆ ತಡೆದು ವಾಹನಗಳನ್ನು ತಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.ವಾಹನ ಸವಾರರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.