ಕೊಡಗು ಪತ್ರಕರ್ತರ ಸಂಘ (ರಿ) ದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಕೊಡಗು ಪತ್ರಕರ್ತರ ಸಂಘ (ರಿ) ದ ವತಿಯಿಂದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಘದ ನೂತನ ಸದಸ್ಯತ್ವಕ್ಕೆ 800 ಹಾಗೂ ಕ್ಷೇಮನಿಧಿ ಸಮಿತಿಗೆ 200 ಸೇರಿದಂತೆ 1000 ರೂ ಹಾಗೂ ಸದಸ್ಯತ್ವ ನವೀಕರಣಕ್ಕೆ ರೂ 500 ಹಾಗೂ ಕ್ಷೇಮನಿಧಿ ಸಮಿತಿಗೆ 200 ಸೇರಿದಂತೆ 700 ರೂ ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 15, 2025 ಕೊನೆಯ ದಿನಾಂಕವಾಗಿದೆ. ಸ್ಥಳೀಯ ,ಪ್ರಾದೇಶಿಕ,ರಾಜ್ಯ,ರಾಷ್ಟ್ರೀಯ ಮಟ್ಟದ ಪತ್ರಿಕೆ ಮತ್ತು ಮಾಧ್ಯಮಗಳು,ವಾರಪತ್ರಿಕೆ ,ಪಾಕ್ಷಿಕಗಳು,ವೆಬ್ ನ್ಯೂಸ್ ಸೇರಿದಂತೆ ಅಧಿಕೃತ ಸುದ್ದಿಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನ ಸಂಪಾದಕರು,ಸಂಪಾದಕರು,ಉಪ ಸಂಪಾದಕರು,ವರದಿಗಾರರು,ಬಿಡಿ ವರದಿಗಾರರು,ಛಾಯಾಚಿತ್ರಗಾರರು,ಕ್ಯಾಮೆರಾ ಮ್ಯಾನ್ ಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಪಾದಕರು ಅಥವಾ ಜಿಲ್ಲಾ ವರದಿಗಾರರ ಸಹಿಯೊಂದಿಗೆ ಎರಡು ಭಾವ ಚಿತ್ರ ಸಲ್ಲಿಸುವುದು ಕಡ್ಡಾಯವಾಗಿದ್ದು ಅರ್ಜಿಗಳಿಗಾಗಿ 9449290718, 9731469871 ,9901657211 ದೂರವಾಣಿಯನ್ನು ಸಂಪರ್ಕಿಸಿ ಅರ್ಜಿ ಪಡೆದುಕೊಳ್ಳಬಹುದು ಎಂದು ಕೊಡಗು ಪತ್ರಕರ್ತರ ಸಂಘ (ರಿ )ದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?






