ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ಮ್ಯಾಡ್ರಿಡ್ ಎಫ್.ಸಿ ತಂಡಕ್ಕೆ ವಿರೋಜಿತ ಸೋಲು: ಮೊದಲ ಬಾರಿಗೆ ಒಫೀಶಿಯಲ್ ಹಳೇ ತಾಲ್ಲೂಕು ಕ್ವಾಟರ್ ಫೈನಲ್ ಗೆ ಲಗ್ಗೆ
ಮಡಿಕೇರಿ: ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾನುವಾರ ನಡೆದ ಮೊದಲ ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಮ್ಯಾಡ್ರಿಡ್ ಎಫ್.ಸಿ (ಬಿ) ಕೊಂಡಂಗೇರಿ ತಂಡವು ವಿರೋಜಿತ ಸೋಲು ಕಂಡಿದೆ.
ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಮ್ಯಾಡ್ರಿಡ್ ಎಫ್.ಸಿ ಕೊಂಡಂಗೇರಿ ಹಾಗೂ ಒಫೀಶಿಯಲ್ ಹಳೇ ತಾಲ್ಲೂಕು ತಂಡವು 2-2 ಗೋಲುಗಳನ್ನು ದಾಖಲಿಸಿ ನಿಗದಿತ ಸಮಯದಲ್ಲಿ ಸಮಬಲ ಸಾಧಿಸಿತು.
ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ 5-4 ಗೋಲುಗಳ ಅಂತರದಿಂದ ಒಫೀಶಿಯಲ್ ತಂಡವು ಗೆಲುವು ಸಾಧಿಸಿ ಕ್ವಾಟರ್ ಫೈನಲ್ ಪ್ರವೇಶಿಸಿತು.
ಕ್ವಾಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕುಂಜಿಲ ಎಫ್.ಸಿ ತಂಡವನ್ನು ಒಫೀಶಿಯಲ್ ತಂಡ ಎದುರಿಸಲಿದೆ.ಎರಡು ಬಾರಿಯ ಚಾಂಪಿಯನ್ ಪ್ರಶಸ್ತಿ ಪಡೆದಿದ್ದ ಸಹರಾ ಹೊಳಮಾಳ ತಂಡವನ್ನು ಮ್ಯಾಡ್ರಿಡ್ ಎಫ್.ಸಿ ತಂಡವು ಸೋಲಿಸಿ ಎಲ್ಲರ ಗಮನ ಸೆಳೆದಿತ್ತು.
What's Your Reaction?






