ದ್ವಿತೀಯ ಪಿಯುಸಿ ಪರೀಕ್ಷೆ: ಸಾಧನೆಗೈದ ನಾಪೋಕ್ಲುವಿನ ವಿದ್ಯಾರ್ಥಿಗಳಿಗೆ ಎನ್.ಸಿ.ಕೆ ಓಲ್ಡ್ ಸ್ಟೂಡೆಂಟ್ ವಾಟ್ಸಪ್ ಗ್ರೂಪ್ ವತಿಯಿಂದ ಸನ್ಮಾನ

May 13, 2025 - 21:03
 0  131
ದ್ವಿತೀಯ ಪಿಯುಸಿ ಪರೀಕ್ಷೆ: ಸಾಧನೆಗೈದ  ನಾಪೋಕ್ಲುವಿನ  ವಿದ್ಯಾರ್ಥಿಗಳಿಗೆ ಎನ್.ಸಿ.ಕೆ ಓಲ್ಡ್ ಸ್ಟೂಡೆಂಟ್ ವಾಟ್ಸಪ್ ಗ್ರೂಪ್ ವತಿಯಿಂದ ಸನ್ಮಾನ

(ವರದಿ:ಝಕರಿಯ ನಾಪೋಕ್ಲು)

ನಾಪೋಕ್ಲು :ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡು ಸಾಧನೆ ಮಾಡಿದ ನಾಪೋಕ್ಲುವಿನ ಇಬ್ಬರು ವಿದ್ಯಾರ್ಥಿಗಳನ್ನು ಎನ್ ಸಿ ಕೆ ಓಲ್ಡ್ ಸ್ಟೂಡೆಂಟ್ಸ್ ವಾಟ್ಸಪ್ ಗ್ರೂಪ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ನಾಪೋಕ್ಲು ಬೇತು ಗ್ರಾಮದ ಕಾರೆಕ್ಕಾಡು ನಿವಾಸಿ ಅಝೀಝ್ ಹಾಗೂ ಆಸಿಯಾ ದಂಪತಿಗಳ ಪುತ್ರಿ ಆಯಿಷಾ ಹಾಗೂ ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮದ ನಿವಾಸಿ ಸಲೀಂ ಹಾಗೂ ಸಮೀನಾ ದಂಪತಿಗಳ ಪುತ್ರಿ ಶಾಹಿನಾಳನ್ನು ಎನ್ ಸಿ ಕೆ ಓಲ್ಡ್ ಸ್ಟೂಡೆಂಟ್ ಗ್ರೂಪಿನ ಸದಸ್ಯರಾದ ಮಹಮ್ಮದ್ ರವರು ವಿದ್ಯಾರ್ಥಿಗಳ ಮನೆಗೆ ತೆರಳಿ ಪೋಷಕರ ಸಮ್ಮು ಖದಲ್ಲಿ ಎನ್ ಸಿ ಕೆ ಓಲ್ಡ್ ಸ್ಟೂಡೆಂಟ್ ಗ್ರೂಪ್ ಪರವಾಗಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0