ಸ್ವಾತಂತ್ರ‍್ಯ ಹೋರಾಟಗಾರ ಕಾಕಮಾಡ ನಾಣಯ್ಯ ಅವರ ಜ್ಞಾಪಕಾರ್ಥ ಕ್ಲಸ್ಟರ್ ಮಟ್ಟದ ಭಾಷಣ ಸ್ಪರ್ಧೆ: ವಿವಿಧ ಶಾಲೆಗಳ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿ

ಸ್ವಾತಂತ್ರ‍್ಯ ಹೋರಾಟಗಾರ ಕಾಕಮಾಡ ನಾಣಯ್ಯ ಅವರ ಜ್ಞಾಪಕಾರ್ಥ ಕ್ಲಸ್ಟರ್  ಮಟ್ಟದ ಭಾಷಣ ಸ್ಪರ್ಧೆ: ವಿವಿಧ ಶಾಲೆಗಳ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿ

ಪೊನ್ನಂಪೇಟೆ :ಪೊನ್ನoಪೇಟೆ ಅಪ್ಪಚ್ಚ ಕವಿ ವಿದ್ಯಾಲಯದ ರಜತ ವೈಭವ ಕಲಾ ಮಂದಿರದಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಕಾಕಮಾಡ ನಾಣಯ್ಯ ಅವರ ಜ್ಞಾಪಕಾರ್ಥ ನಡೆದ ಕ್ಲಸ್ಟರ್ ಮಟ್ಟದ ಭಾಷಣ ಸ್ಪರ್ಧೆಗೆ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಕೊಡಗಿನ ವೀರ ವನಿತೆಯರ ಸ್ಮರಣೆ ವಿಷಯದಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಭಯೋತ್ಪಾದನೆ ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಗಂಭೀರ ಪರಿಣಾಮ ಬಿರುತ್ತಿದೆ, ಹೌದು ಅಥವಾ ಇಲ್ಲ, ಎಂಬ ವಿಷಯಕ್ಕೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಭಾಷಣ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಕೆಪಿಎಸ್ ಶಾಲೆ, ಸಾಯಿ ಶಂಕರ್ ಶಾಲೆ ,ಕೂರ್ಗ್ ಸಿಂಗ್ನೇಚರ್ ಶಾಲೆ, ಕಿರುಗೂರು ಹಿರಿಯ ಪ್ರಾಥಮಿಕ ಶಾಲೆ, ನೀನಾದ ಶಾಲೆ , ಸೆಂಟ್ ಅಂಟೊನಿಸ್ ಶಾಲೆ, ಹಾಗೂ ಅಪಚ್ಚ ಕವಿ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

 ತೀರ್ಪುಗಾರರಾಗಿ ಲಯನ್ಸ್ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಆರತಿ ಸತ್ಯ, ನಿವೃತ್ತ ಆಂಗ್ಲ ಶಿಕ್ಷಕ ಕೆ. ಕಿರಣ್ ನಾಚಪ್ಪ, ಕಾಲ್ಸ್ ಶಾಲೆಯ ಕನ್ನಡ ಉಪನ್ಯಾಸಕಿ ಸಕ್ಕೂ ಮಂದಣ್ಣ, ನಿವೃತ್ತ ಶಿಕ್ಷಕಿ ಎಂ ಪಾರ್ವತಿ ಜೋಯಪ್ಪ, ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಪ್ಪಚ್ಚ ಕವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪೊನ್ನಿಮಾಡ ಸುರೇಶ್ ಅವರು, ಸ್ವಾತಂತ್ರ‍್ಯ ಸಂಗ್ರಾಮದ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗೋಣಿಕೊಪ್ಪ ಕಾವೇರಿ ಕಾಲೇಜು ಪ್ರಾಧ್ಯಾಪಕಿ ಎಂ. ಎಸ್ ಭಾರತಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಮುಖ್ಯ. ಪ್ರತಿಯೊಬ್ಬರೂ ಕಲಿಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ದತ್ತಿನಿಧಿ ದಾನಿಗಳಾದ ಕಾಕಮಾಡ ಗಂಗಾ ಚಂಗಪ್ಪ ಅವರು ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು.

ಅಪ್ಪಚ್ಚ ಕವಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ಮೂಕಳೇರ ಕಾವ್ಯ ಕಾವೇರಪ್ಪ, ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ, ಜಂಟಿ ಕಾರ್ಯದರ್ಶಿ ಕಳ್ಳಿಚಂಡ ದೇವಯ್ಯ, ನಿರ್ದೇಶಕಿ ಗುಮ್ಮಟ್ಟೀರ ಗಂಗಮ್ಮ, ಚೆರಿಯಾಪಂಡ ಇಮ್ಮಿ ಉತ್ತಪ್ಪ, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವೃಂದ ಇದ್ದರು. ಸ್ಪರ್ಧೆಯಲ್ಲಿ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ: ಚಂಪಾ ಗಗನ , ಪೊನ್ನಂಪೇಟೆ.