ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಮಡಿಕೇರಿಯಲ್ಲಿ ಜನಜಾಗೃತಿ ಜಾಥಾ
admincoorgdaily

ಮಡಿಕೇರಿ: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಹೆಸರಿನಲ್ಲಿ ಪ್ರಜಾಸತಾತ್ಮಕ ಮೌಲ್ಯಗಳನ್ನು ಕಸಿಯುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ನಗರದ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಎದ್ದೇಳು ಕರ್ನಾಟಕ ಸಮಿತಿ ವತಿಯಿಂದ ಜಾಥಾ ನಡೆಸಲಾಯಿತು.
ಬಿಹಾರದಲ್ಲಿ ೬೫ ಲಕ್ಷ ನುಸುಳುಕೋರರಿದ್ದಾರೆ ಎಂಬ ಆರೋಪಕ್ಕೆ ಪುರಾವೆ ಇಲ್ಲದೆ ಕೇವಲ ೨ ಜನ ಮಾತ್ರ ಪತ್ತೆಯಾಗಿದ್ದಾರೆ. ಪರಿಷ್ಕರಣೆ ಅಗತ್ಯವಾದರೂ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಆಧಾರ್ ಕಡೆಗಣಿಸಿರುವುದು ಅನುಮಾನಾಸ್ಪದ. ಜಿಲ್ಲೆಯ ಆದಿವಾಸಿಗಳ ಬಳಿ ಚುನಾವಣಾ ಆಯೋಗ ಕೇಳುವ ದಾಖಲೆಗಳಿಲ್ಲದ ಕಾರಣ ಅವರು ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾ ನಿರತರು ಹೇಳಿದರು. ಈ ಸಂದರ್ಭ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಸಾಹಿತಿಗಳಾದ ಜೆ.ಸೋಮಣ್ಣ, ಮನ್ಸೂರ್, ಹನೀಫ್ ಸೇರಿದಂತೆ ಹಲವರು ಭಾಗವಹಿಸಿದ್ದರು.