Kodagu

ಮಡಿಕೇರಿ ಕಾರಾಗೃಹದಲ್ಲಿ ಕೈದಿ ಸಾವು: ನ್ಯಾಯಕ್ಕಾಗಿ ಕಣ್ಣೀರಿನ ಮೊರೆ

admincoorgdaily

ಮಡಿಕೇರಿ ಕಾರಾಗೃಹದಲ್ಲಿ ಕೈದಿ ಸಾವು: ನ್ಯಾಯಕ್ಕಾಗಿ ಕಣ್ಣೀರಿನ ಮೊರೆ

ಮಡಿಕೇರಿ: ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟ ವಿಚಾರಣಾಧೀನ ಕೈದಿ ಹೇಮಂತ್ ಸಾವಿಗೆ ನ್ಯಾಯ ಮತ್ತು 5 ಕೋಟಿ ರೂ. ಪರಿಹಾರ ನೀಡುವಂತೆ ಮೃತನ ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತಂದೆ ರವಿ ಮತ್ತು ತಾಯಿ ಇಂದಿರಾ ಇದು ಉದ್ದೇಶಪೂರ್ವಕ ಕೃತ್ಯವಾಗಿದೆ. ಪ್ರಕರಣದಲ್ಲಿ ಪೊಲೀಸರ ಕೈವಾಡವಿದೆ. ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಅಲವತ್ತುಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕುಶಾಲಪ್ಪ, ಪ್ರಶಾಂತ್, ಜಗದೀಶ್, ಹಸೈನರ್ ಉಪಸ್ಥಿತರಿದ್ದರು.