ಗೋಣಿಕೊಪ್ಪ: ಶ್ರೀ ಪಸನ್ನ ಗಣಪತಿ ಸೇವಾ ಸಂಘದ 14ನೇ ವರ್ಷದ ಗೌರಿ-ಗಣೇಶ ವಿಸರ್ಜನೋತ್ಸವ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಜೋಡುಬೀಟಿ, ಕಾರ್ಯದರ್ಶಿಯಾಗಿ ರಾಘವೇಂದ್ರ ಸಿಎಂ ಅವಿರೋಧ ಆಯ್ಕೆ

ಗೋಣಿಕೊಪ್ಪ: ಶ್ರೀ ಪಸನ್ನ ಗಣಪತಿ ಸೇವಾ ಸಂಘದ 14ನೇ ವರ್ಷದ ಗೌರಿ-ಗಣೇಶ ವಿಸರ್ಜನೋತ್ಸವ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಜೋಡುಬೀಟಿ, ಕಾರ್ಯದರ್ಶಿಯಾಗಿ ರಾಘವೇಂದ್ರ ಸಿಎಂ ಅವಿರೋಧ ಆಯ್ಕೆ

ಗೋಣಿಕೊಪ್ಪ: ಗೋಣಿಕೊಪ್ಪ ಗ್ರಾಪಂ ವ್ಯಾಪ್ತಿಯ 1ನೇ ವಿಭಾಗ ಶ್ರೀ ಪ್ರಸನ್ನ ಗಣಪತಿ ಸೇವಾ ಸಂಘದ 14ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವ ಆಚರಣೆ ಸಮಿತಿಯ 2025ನೇ ಸಾಲಿನ ಅಧ್ಯಕ್ಷರಾಗಿ ಜಗದೀಶ್ ಜೋಡುಬೀಟಿ, ಕಾರ್ಯದರ್ಶಿಯಾಗಿ ರಾಘವೇಂದ್ರ ಸಿ ಎಂ ಅವಿರೋಧ ಆಯ್ಕೆಯಾಗಿದ್ದಾರೆ. ಸಂಘದ ಕಳೆದ ಸಾಲಿನ ಉತ್ಸವದ ಲೆಕ್ಕಪತ್ರ ಮಂಡನೆ ಮತ್ತು ಆಗಸ್ಟ್ 27ರಂದು ನಡೆಯಲಿರುವ ಗೌರಿ ಗಣೇಶ ಪ್ರತಿಷ್ಠಾಪನೆ ಮತ್ತು ನಂತರದ ವಿಸರ್ಜನೋತ್ಸವದ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವ ಅಧ್ಯಕ್ಷರಾಗಿ ವಿ.ಟಿ. ಮಂಜುನಾಥ್, ಉಪಾಧ್ಯಕ್ಷರಾಗಿ ದಿಲೀಪ್, ಅನಿಲ್ ಕೆ.ವಿ, ಸಂಘಟನ ಕಾರ್ಯದರ್ಶಿಯಾಗಿ ಮುಕೇಶ್ ಕೆ ಕೆ, ಸಹ ಕಾರ್ಯದರ್ಶಿ ಮುರುಳಿ, ಖಜಾಂಚಿ ರಾಘವೇಂದ್ರ ಆರ್, ಅನ್ವಿತ ಆರ್ ಮತ್ತು ಸದಸ್ಯರುಗಳಾಗಿ ನವೀನ್, ರವಿರಾಜ್, ಪ್ರಮೋದ್, ನವೀನ್, ಆಕಾಶ್, ಆಶಿಕ್, ರಾಕೇಶ್ ಬಿ.ವಿ, ಶಿವ, ಮಣಿಕಂಠ, ಲೋಹಿತ್, ಲವ, ರಾಮ್ ದಾಸ್, ಅನಿಲ,ರಾಕೇಶ್ ಕುಟ್ಟ, ಭರತ್, ಪುನೀತ್, ಹರೀಶ್, ಸುರೇಶ್, ಪ್ರವೀಣ್ ಕವನ್, ಜಗತ್, ಚಿನ್ನಪ್ಪ ಇವರನ್ನು ಆಯ್ಕೆ ಮಾಡಲಾಯಿತು.

ಬಾಲ ಮಂಡಳಿ ಸಮಿತಿ:

 ಅಧ್ಯಕ್ಷರಾಗಿ ಪ್ರಜ್ವಲ್, ಉಪಾಧ್ಯಕ್ಷರಾಗಿ ಆಯುಷ್, ಲಿಖಿತ್ ಕಾರ್ಯದರ್ಶಿ, ಪ್ರೀತಮ್, ಖಜಾಂಚಿ ರಾಶಿ ಆರ್ ಅಯ್ಕೆಯಾಗಿದ್ದಾರೆ.