ಆರ್‌ಎಸ್‌ಎಸ್ ನಿಷೇಧಕ್ಕೆ ಮುಂದಾದರೆ ದೇಶವೇ ದಂಗೆ ಏಳಲಿದೆ:ಮಾಜಿ ಶಾಸಕ ಅಪ್ಪಚ್ಚು ರಂಜನ್
ಮಡಿಕೇರಿ: ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್‌ಎಸ್‌ಎಸ್ ನಡೆಸುವ ಚಟುವಟಿಕೆಗಳಿಗೂ ನಿಷೇಧ ಹೇರಲು ಮುಖ್ಯಮಂತ್ರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದ ಮಾಜಿ ಸಚಿವರು ಮತ್ತು ಮಾಜಿ ಶಾಸಕ ಅಪ್ಪಚ್ಚು ರಂಜನ್, ಆರ್‌ಎಸ್‌ಎಸ್ ನಿಷೇಧಕ್ಕೆ ಮುಂದಾದರೆ ದೇಶವೇ ದಂಗೆ ಏಳಲಿದೆ ಎಂದು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ದೇಶಾದ್ಯಂತ ವಿಶಾಲವಾಗಿದೆ. ನಿಶೇಧ ಮಾಡಲು ಅಧಿಕಾರವು ಇಲ್ಲ. ಈ ಸಂಘಟನೆ ಒಂದು ಜಾತಿಗೆ ಸೀಮಿತವಾಗದೇ ರಾಷ್ಟ್ರೀಯತೆಯನ್ನು ಕಲಿಸುವ ಕೇಂದ್ರವಾಗಿದೆ. ಯಾರಾದರೂ ಅಲ್ಲಿಗೆ ಹೋಗಿ ಭಾಗವಹಿಸಬಹುದು. ಆರ್‌ಎಸ್‌ಎಸ್ ಅನ್ನು ನಿಷೇಧಿಸುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ ಎಂದು ಹೇಳಿದರು.
ಒಬ್ಬ ವ್ಯಕ್ತಿಯ ಧ್ವೇಷದಿಂದ ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್‌ಎಸ್‌ಎಸ್ ನಡೆಸುವ ಚಟುವಟಿಕೆಗಳಿಗೂ ನಿಷೇಧ ಹೇರುತ್ತಿರುವುದು ಸರಿಯಲ್ಲ. ಇದು ಖಂಡನೀಯ ಕೂಡ ಎಂದ ಅವರು, ಕಾಂಗ್ರೆಸ್‌ಗೆ ರಾಷ್ಟ್ರೀಯ ಸ್ವಯಂ ಸೇವಕರನ್ನು ನೋಡಿ ಭಯ ಆರಂಭವಾಗಿದೆ ಎಂದರು.ತಂದೆಯ ಹೆಸರಿನಲ್ಲಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ, ತಾಕತ್ತಿದ್ದರೆ ತಂದೆಯನ್ನು ಸಿಎಂ ಮಾಡಲಿ ಎಂದು ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲೀರ ಚಲನ್, ವಿ.ಕೆ.ಲೋಕೇಶ್, ಮಹೇಶ್ ಜೈನಿ, ವಕ್ತಾರರಾದ ತಳೂರು ಕಿಶೋರ್ ಉಪಸ್ಥಿತರಿದ್ದರು.