ವಾಹನಗಳಲ್ಲಿ ಹೆಚ್ಚಿನ ಸರಕು ಸಾಗಾಣಿಕೆ: ಕ್ರಮಕ್ಕೆ ಆಗ್ರಹ

ವಾಹನಗಳಲ್ಲಿ ಹೆಚ್ಚಿನ ಸರಕು ಸಾಗಾಣಿಕೆ: ಕ್ರಮಕ್ಕೆ ಆಗ್ರಹ

ಕುಶಾಲನಗ: ಟಿಪ್ಪರ್ ಹಾಗೂ ಇನ್ನಿತರ ಸರಕುಸಾಗಣೆ ವಾಹನಗಳಲ್ಲಿ ಹೆಚ್ಚಿನ ಸರಕುಸಾಗಣೆ ಮಾಡುತ್ತಿರುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು‌ ಕುಶಾಲನಗರದ‌ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ. ಕುಶಾಲನಗರ ವ್ಯಾಪ್ತಿಯಲ್ಲಿ ಬಹಳಷ್ಟು ವಾಹನಗಳು ಸಾಮರ್ಥ್ಯಕ್ಕಿಂದ ಹೆಚ್ಚು ಸರಕುಗಳನ್ನು ಹಾಕಿ ವಾಹನ‌ ಚಲಾಯಿಸುತ್ತಿರುತ್ತಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

 ಎಮ್.ಸ್ಯಾಂಡ್, ಮಣ್ಣು, ಜೆಲ್ಲಿ ಹಾಹೂ ಇನ್ನಿತರ ವಸ್ತುಗಳನ್ನು ಹೆಚ್ಚಾಗಿ ಲೋಡ್ ಮಾಡಿ ವಾಹನ ಚಲಾಯಿಸಿತ್ತಿದ್ದು, ರಸ್ತೆಯುದ್ದಕ್ಕೂ ಸರಕುಗಳು ಚೆಲ್ಲುತ್ತಿವೆ. ಇದಿರಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜೆಲ್ಲಿ ಕಲ್ಲುಗಳು ವಾಹನದ ಚಕ್ರಕ್ಕೆ ತಗುಲಿ ಪಾದಚಾರಿಗಳಿಗೆ ತಗುಲುವ ಸಾಧ್ಯತೆಗಳಿವೆ.‌ ಈ ಹಿಂದೆ ಸಾರ್ವಜನಿಕರೊಬ್ಬರ ಕಣ್ಣಿಗೆ ತಗುಲಿ ಗಾಯವಾಗಿತ್ತು.‌ ರಸ್ತೆಯಲ್ಲಿ ಜೆಲ್ಲಿಗಳು ಬಿದ್ದಿರುವ ಸ್ಥಳಗಳಲ್ಲಿ ಬೈಕ್ ಸವಾರರು ವಾಹನ ಚಲಾಯಿಸಲು ತೊಂದರೆಯಾಗುತ್ತಿದೆ.‌ ಹಲವು‌ ಬಾರಿ ಜಾರಿ ಬಿದ್ದು ಅಪಘಾತಗಳು ಸಂಭವಿಸಿವೆ. ಆದ್ದರಿಂದ ಸಂಬಂಧಪಟ್ಟವರು ಸಮಸ್ಯೆ ಸೂಕ್ಷ್ಮತೆಯನ್ನು ಅರಿತು, ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು. ಯಾವುದೇ ಪ್ರಭಾವಕ್ಕೂ ಅಧಿಕಾರಿಗಳು ಮಣಿಯದೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಇಂಡಸ್ಟ್ರಿಯಲ್ ಏರಿಯಾದಿಂದ ಹತ್ತಾರು ಟಿಪ್ಪರ್ ಗಳು ಜೆಲ್ಲಿ, ಎಮ್.ಸ್ಯಾಂಡ್, ಕತ್ತರಿಸಿದ ಮರಗಳನ್ನು ಹಾಕಿ ಬರುತ್ತಾರೆ.‌ ಬಹುತೇಕ ವಾಹನಗಳು ಟಾರ್ಪಲ್ ಬಳಸುವುದಿಲ್ಲ. ಅಲ್ಲದೇ ಹೆಚ್ಚು ಸರಕುಗಳನ್ನು ಹಾಕಿ ವಾಹನ ಚಲಾಯಿಸುತ್ತಾರೆ. ಈ ರೀತಿ ಸಾರ್ವಜನಿಕರಿಗೆ ಸಮಸ್ಯೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.