ಚಿನ್ನಾಭರಣ ಕಳ್ಳತನ ಪ್ರಕರಣ : ಆರೋಪಿ ಬಂಧನ
ಶನಿವಾರಸಂತೆ, ಮೇ 26: ಮಾದ್ರೆ ಗ್ರಾಮದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಾ.20 ರಂದು ಮಾದ್ರೆ ಗ್ರಾಮದ ದರ್ಶಿಕ ಹಾಗೂ ಸಂತೋಷ್ ಕುಮಾರ್ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಿನ್ನಾಭರಣ ಕಳ್ಳತನ ನಡೆದಿತ್ತು.
ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮೂಲತಃ ಅರಸೀಕೆರೆ ತಾಲೂಕಿನ ನಿವಾಸಿ. ಪ್ರಸ್ತುತ ಸಕಲೇಶಪುರದ ಕುಣಿಗಲ್ ಗ್ರಾಮದ ಲೈನ್‌ಮನೆಯಲ್ಲಿ ವಾಸವಿದ್ದ ಗಿರೀಶ ಎಂಬಾತನನ್ನು ಮಿಂಚಿನ ಕಾರ್ಯಾಚರಣೆ ನಡೆಸಿ 2 ದಿನಗಳಲ್ಲಿ ಬಂಧಿಸಿದ್ದಾರೆ.
ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಸೋಮವಾರಪೇಟೆ ಡಿವೈಎಸ್ಪಿ ಚಂದ್ರಶೇಖರ್ ಮಾರ್ಗದರ್ಶನ, ಶನಿವಾರಸಂತೆ ವೃತ್ತ ನಿರೀಕ್ಷಕ ಕೃಷ್ಣರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಗೋವಿಂದ್ ರಾಜ್, ಸಿಬ್ಬಂದಿ ಹರ್ಷ, ಮಹೇಶ್, ರಂಜಿತ್ ಹಾಗೂ ಕೇಶವ ಪಾಲ್ಗೊಂಡಿದ್ದರು.
