ಶಾಸಕ ಎಎಸ್ ಪೊನ್ನಣ್ಣ ಅವರ ಅನುದಾನದ 15ಲಕ್ಷ ರೂ ವೆಚ್ಚದಲ್ಲಿ ಚೆಂಬು ಗ್ರಾಮದ ಕಜೆ-ಪರ್ದಾಯಗದ್ದೆ ರಸ್ತೆ ಕಾಮಗಾರಿ
ಸಂಪಾಜೆ:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರ ಅನುದಾನದಲ್ಲಿ, ಚೆಂಬು ಗ್ರಾಮದ ಕಜೆ-ಪರ್ದಾಯಗದ್ದೆ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದೆ.
ಅಂದಾಜು ₹ 15 ಲಕ್ಷದ ಈ ಕಾಮಗಾರಿ ಸದ್ಯದಲ್ಲೇ ಮುಕ್ತಾಯಗೊಳ್ಳಲಿದ್ದು, ಚೆಂಬು ವಲಯ ಕಾಂಗ್ರೆಸ್ ಪ್ರಮುಖರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು. ಮಳೆಗಾಲದಲ್ಲಿ ಇಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅತ್ಯಂತ ದುಸ್ತರವಾಗಿರುವುದನ್ನು ಗಮನಿಸಿದ ಶಾಸಕರು, ಸ್ಥಳೀಯ ಪ್ರಮುಖರು ಹಾಗೂ ಗ್ರಾಮಸ್ಥರ ಮನವಿ ಮೇರೆಗೆ ಈ ಅನುದಾನ ಒದಗಿಸಿದ್ದರು.
ಸದ್ಯದಲ್ಲೇ ಶಾಸಕರು ಚೆಂಬು ಗ್ರಾಮಕ್ಕೆ ಭೇಟಿ ನೀಡುವವರಿದ್ದು, ಆ ಸಂದರ್ಭದಲ್ಲಿ ಪೂರ್ಣಗೊಂಡಿರುವ ಇತರ ಕಾಮಗಾರಿಗಳೊಂದಿಗೆ ಈ ರಸ್ತೆಯನ್ನೂ ಲೋಕಾರ್ಪಣೆ ಮಾಡಲಾಗುವುದು ಎಂದು ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಸೂರಜ್ ಹೊಸೂರು, ವಲಯ ಪ್ರಮುಖರಾದ ಸೋಮಣ್ಣ ಬಾಲಂಬಿ, ವಲಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಮಂಗಳಪಾರೆ, ನವೀನ್ ರಾಮಕಜೆ ಮತ್ತಿತರರು ಉಪಸ್ಥಿತರಿದ್ದರು.