ಟಿ.ಶೆಟ್ಟಿಗೇರಿಯಲ್ಲಿ 1.6 ಕೋಟಿ ವೆಚ್ಚದಲ್ಲಿ 11.ಕೆವಿ ಹೆಚ್.ಟಿ ವಿದ್ಯುತ್ ಮಾರ್ಗ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎ.ಎಸ್ ಪೊನ್ನಣ್ಣ
ವಿರಾಜಪೇಟೆ :ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯಲ್ಲಿ, ಅಂದಾಜು ₹1.6 ಕೋಟಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 11 ಕೆವಿ ಹೆಚ್ ಟಿ ವಿದ್ಯುತ್ ಮಾರ್ಗದ ಸ್ಥಾಪನೆಗೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೂಮಿ ಪೂಜೆ ನೆರವೇರಿಸಿದರು.
ಗುಣಮಟ್ಟದ ವಿದ್ಯುತ್ ಸರಬರಾಜಿಗೆ 11 ಕಿವಿ ಮಾರ್ಗವನ್ನು ಸ್ಥಾಪಿಸುವ ಕುರಿತಾಗಿ ಅನುಮೋದನೆ ದೊರಕಿದ ಕಾರಣ, ಇಂದು ಈ ಕಾಮಗಾರಿ ಆರಂಭಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು..
ಈ ಮೊದಲು ಈ ವಿದ್ಯುತ್ ಮಾರ್ಗವು ಇತರರ ತೋಟದ ಮಧ್ಯಭಾಗದಲ್ಲಿ ಇದ್ದುದರಿಂದ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಅನಾನುಕೂಲ ಆಗುತ್ತಿತ್ತು. ಈಗ ಸದರಿ ನೂತನ ಮಾರ್ಗವನ್ನು ರಸ್ತೆ ಬದಿಯಲ್ಲೇ ಅಳವಡಿಸುವುದರಿಂದಾಗಿ ಎಲ್ಲಾ ಸಮಸ್ಯೆಗೆ ಇತಿಶ್ರೀ ಹಾಡಿದಂತಾಗಿದೆ.ಶಾಸಕರ ಈ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಬಗರ್ ಹುಕುಂ ತಾಲೂಕು ಅಧ್ಯಕ್ಷರು ಲಾಲಾ ಅಪ್ಪಣ್ಣ, ಟಿ ಶೆಟ್ಟಿಗೇರಿ ವಲಯ ಅಧ್ಯಕ್ಷರು ತಿತೀರ ಪ್ರಭು, ಹಿರಿಯ ನಾಗರಿಕ ವೇದಿಕೆ ಸದಸ್ಯರಾದ ವಿಶ್ವನಾಥ್, ಮೋಟಯ್ಯ, ಉದಯ ಹಾಗೂ ಡಿಸಿಸಿ ಸದಸ್ಯರು, ವಲಯ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.