ನಗರಸಭೆ ಬಿಜೆಪಿ ಆಡಳಿತ ವೈಫಲ್ಯ ಖಂಡಿಸಿ ಮೇ26 ರಂದು ಮಡಿಕೇರಿ ನಗರ ಕಾಂಗ್ರೆಸ್ ಪ್ರತಿಭಟನೆ
admincoorgdaily

ಮಡಿಕೇರಿ: ಬಿಜೆಪಿ ಆಡಳಿತ ವೈಫಲ್ಯ ಖಂಡಿಸಿ ಮೇ೨೬ರಂದು ಬೆಳಗ್ಗೆ ೧೧ ಗಂಟೆಗೆ ನಗರಸಭೆ ಮುಂಭಾಗ ನಗರ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಅಧ್ಯಕ್ಷ ಎಸ್.ಪ್ರಕಾಶ್ ಆಚಾರ್ಯ ತಿಳಿಸಿದರು.
೪ ವರ್ಷದಲ್ಲಿ ನಗರಸಭೆ ನರಕ ಸಭೆಯಾಗಿದೆ. ಸಾರ್ವಜನಿಕರಿಗೆ ಪ್ರಯೋಜನವಿಲ್ಲ. ಮಳೆಗಾಲಕ್ಕೆ ಚರಂಡಿ ಸ್ವಚ್ಛತೆ ಆಗಿಲ್ಲ. ರಸ್ತೆ ಗುಂಡಿ, ಕಸ ವಿಲೇವಾರಿ ವೈಫಲ್ಯ, ಬೀದಿ ನಾಯಿಗಳ ಹಾವಳಿ ನಿಯಂತ್ರಣವಾಗಿಲ್ಲ. ಅಮೃತ್ ೨.೦ ಕಾಮಗಾರಿಯಿಂದ ರಸ್ತೆ ಗುಂಡಿಗಳಾಗಿವೆ.
ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಸಮಿತಿ ಪ್ರಮುಖರಾದ ಕೋಚನ ಚೇತನ್, ಮಿನಾಜ್ಹ್ ಪ್ರವೀಣ್, ಗೋಪಿನಾಥ್, ಮುನೀರ್ ಆಚಾರ್, ಸದಾಮುದ್ದಪ್ಪ, ಇದ್ದರು.