Kodagu

ಮಡಿಕೇರಿ:ಮರ ಕಡಿಯುವಾಗ ಮರದಿಂದ ಬಿದ್ದು ಕಾರ್ಮಿಕ‌ ಸಾವು

admincoorgdaily

ಮಡಿಕೇರಿ:ಮರ ಕಡಿಯುವಾಗ ಮರದಿಂದ ಬಿದ್ದು ಕಾರ್ಮಿಕ‌ ಸಾವು

ಮಡಿಕೇರಿ:ಮರ ಕಡಿಯುವಾಗ ಮರದಿಂದ ಬಿದ್ದು ಅರಂತೋಡು ಮೂಲದ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ನಗರಸಭೆ ಕ್ವಾರ್ಟರ್ಸ್ ನಲ್ಲಿ ನಡೆದಿದೆ.

 ನಗರಸಭೆ ಸಿಬ್ಬಂದಿ ಸೋಮಶೇಖರ್ ಎಂಬುವವರು ಅವರ ವಾಸಿಸುವ ಕ್ವಾರ್ಟರ್ಸ್ ನ ಪಕ್ಕದಲ್ಲಿದ್ದ ಮರವನ್ನು ಕಡಿಸುವ ವೇಳೆ ಘಟನೆ ನಡೆದಿದ್ದು, ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ವ್ಯಕ್ತಿ ಸಾವನ್ನಪ್ಪಿದ್ದಾರೆ.ಮರ ಕಡಿಯಲು ಅನುಮತಿ ಪಡೆಯದಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಸ್ಥಳಕ್ಕೆ ನಗರಸಭಾ ಅಧ್ಯಕ್ಷೆ ಶ್ರೀಮತಿ ಕಲಾವತಿ ಹಾಗೂ ಮಡಿಕೇರಿ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.