ಮಡಿಕೇರಿ: ವಿವಿಧ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪನೆ ಮಾಡಿರುವ ಸಮಿತಿಗಳಿಗೆ ಶಾಸಕ ಮಂತರ್ ಗೌಡ ಭೇಟಿ

ಮಡಿಕೇರಿ: ವಿವಿಧ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪನೆ ಮಾಡಿರುವ ಸಮಿತಿಗಳಿಗೆ  ಶಾಸಕ ಮಂತರ್ ಗೌಡ ಭೇಟಿ

ಮಡಿಕೇರಿ:ಗೌರಿ ಗಣೇಶ ಹಬ್ಬದ ಸಂಭ್ರಮ ಮಡಿಕೇರಿ ನಗರದಲ್ಲಿ ಮುಂದುವರೆದಿದ್ದು ನಗರದಲ್ಲಿ ಹಲವಾರು ಬಡಾವಣೆಗಳಲ್ಲಿ ವಿವಿಧ ಗಣೇಶೋತ್ಸವ ಸಮಿತಿಯ ಸದಸ್ಯರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಘ್ನೇಶ್ವರನನ್ನು ಆರಾಧಾನೆಯನ್ನು ಮಾಡುತ್ತಿದ್ದಾರೆ.ಅದರಂತೆ ಮಡಿಕೇರಿ ನಗರದ ಪುಟಾಣಿ ನಗರದಲ್ಲೂ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ನೇರವೇರಿಸಲಾಗುತ್ತಿದೆ.ಈ ಹಿನ್ನಲೆಯಲ್ಲಿ ಮಡಿಕೇರಿ ಶಾಸಕ ಮಂತರ್ ಗೌಡ ಅವರು ಶುಕ್ರವಾರ ಸಂಜೆ 7:30ರ ಸಮಯದಲ್ಲಿ ಪುಟಾಣಿ ನಗರದ ಉದ್ಭವ ಶ್ರೀ ವಿನಾಯಕ ಸೇವಾ ಸಮಿತಿಗೆ ಅಗಮಿಸಿ ಸಮಿತಿಯ ಸದಸ್ಯರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗಿದರು.ಇದೇ ಸಂದರ್ಭ ನಗರಸಭೆ ಸದಸ್ಯ ರಾಜೇಶ್ ಯಲ್ಲಾಪ್ಪ ಕಾಂಗ್ರೆಸ್ ಮುಖಂಡರು ಸೇರಿದಂತೆ ಸಮಿತಿಯ ‌ಸದಸ್ಯರು ಇದ್ದರು.