ಮಾಲಂಬಿ ಗ್ರಾಮದೇವತೆ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಸಂಪನ್ನ

Apr 29, 2026 - 10:20
 0  281
ಮಾಲಂಬಿ ಗ್ರಾಮದೇವತೆ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಸಂಪನ್ನ

ಶನಿವಾರಸಂತೆ:ಏ28:-ಸಮೀಪದ ಮಾಲಂಬಿ ಗ್ರಾಮದಲ್ಲಿರುವ ಗ್ರಾಮ ದೇವತಾ ಸೇವಾ ಸಮಿತಿ ವತಿಯಿಂದ ನಿರ್ಮಿಸಿರುವ ಗ್ರಾಮ ದೇವತೆ ಪುನರ್ ಪ್ರತಿಷ್ಠಾಪನಾ ಪೂಜಾ ಮಹೋತ್ಸವ ಕಾರ್ಯಕ್ರಮ ಮಂಗಳವಾರ ಸಂಪನ್ನಗೊಂಡಿತು.

ಮಾಲಂಬಿ ಗ್ರಾಮದಲ್ಲಿ ಹಲವಾರು ವರ್ಷಗಳ ಹಿಂದೆ ಗ್ರಾಮದೇವತೆ ಬನವನ್ನು ನಿರ್ಮಿಸಲಾಗಿತು ಆದರೆ ವರ್ಷದ ಹಿಂದೆ ಗ್ರಾಮದೇವತೆ ಬನವು ಭಗ್ನಗೊಂಡಿದ್ದ ಹಿನ್ನಲೆಯಲ್ಲಿ ಗ್ರಾಮದೇವತಾ ಸೇವಾ ಸಮಿತಿಯವರು ಅದೇ ಸ್ಥಳದಲ್ಲಿ ಗ್ರಾಮದೇವತೆ ಬನವನ್ನು ಪುನರ್ ಪ್ರತಿಷ್ಠಾಪಿಸಿರುವ ಹಿನ್ನಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ 7.30 ಗಂಟೆಯಿಂದ ಗ್ರಾಮದೇವತೆಗೆ ವಿಶೇಷ ಪೂಜಾ ಕೈಂಕರ್ಯಗಳು ಸೇರಿದಂತೆ ಹೋಮ ಮುಂತಾದ ವಿದಿ ವಿಧಾನಗಳನ್ನು ನೆರವೇರಿಸಲಾಯಿತು. ಪುನರ್ ಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಮಂಗಳವಾರ ಬೆಳಗ್ಗೆ ಮಾಲಂಬಿ ಗ್ರಾಮದ ಮಹಿಳೆಯರು ಚಿಲುಮೆ ಬಾವಿಯಿಂದ ಕಳಸದಲ್ಲಿ ಗಂಗಾಜಲವನ್ನು ಸಂಗ್ರಹಿಸಿ ಕಳಸವನ್ನು ಹೊತ್ತು ಮೆರವಣಿಗೆ ಮೂಲಕ ಗ್ರಾಮದೇವತೆ ಸನ್ನಿಧಿಯಲ್ಲಿ ತಂದಿಟ್ಟರು.

ನಂತರ ಅರ್ಚಕರು ವಿಶೇಷ ಪೂಜೆ ಹೋಮ ಇನ್ನು ಮುಂತಾದ ದೇವತಾ ಕಾರ್ಯವನ್ನು ನೆರವೇರಿಸಿದ ಬಳಿಕ ಗ್ರಾಮದೇವತೆ ದೇವಿಯನ್ನು ಪುನರ್ ಪುನರ್ ಪ್ರತಿಷ್ಠಾಪಿಸಲಾಯಿತು.

 ತದನಂತರ ಗ್ರಾಮದೇವತೆಗೆ ಮಹಾಮಂಗಳಾರತಿ, ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು. ಶನಿವಾರಸಂತೆ ಗಣಪತಿ ದೇವಸ್ಥಾನದ ಅರ್ಚಕ ಮಾಲತೇಶ್ ಭಟ್ ನೇತೃತ್ವದಲ್ಲಿ ಅರ್ಚಕರು ಪೂಜಾ ವಿದಿ ವಿಧಾನ ನೆರವೇರಿಸಿದರು ಗ್ರಾಮದೇವತೆ ಪುನರ್ ಪತ್ರಿಷ್ಠಾಪನಾ ಮಹೋತ್ಸವ ಸಂದರ್ಭದಲ್ಲಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು ಗ್ರಾಮದೇವತಾ ಸೇವಾ ಸಮಿತಿಯಿಂದ ಗಣ್ಯರಿಗೆ, ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

 ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಸೇವಾ ಸಮಿತಿ ವತಿಯಿಂದ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು ಈ ಮೂಲಕ ಗ್ರಾಮದವೇವತಾ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಬಣೆಯಿಂದ ಸಂಪನ್ನಗೊಂಡಿತ್ತು. ಈ ಸಂದರ್ಭದಲ್ಲಿ ಸೇವಾ ಸಮಿತಿ ಪದಾಧಿಗಳು, ಸದಸ್ಯರು, ದಾನಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0