ಸಮಾಜದ ಅಭಿವೃದ್ದಿಗೆ ಯುವ ಸಮೂಹವು ಪೂರಕವಾಗಿ ಸ್ಪಂದಿಸಬೇಕು: ಕೌಶಿ ಕಾವೇರಮ್ಮ
ಕಡಂಗ: ಕಾಲೇಜು ಶಿಕ್ಷಣ ಪಠ್ಯೇತರ ಚಟುವಟಿಕೆಗಳನ್ನು ತಿಳಿಸಿಕೊಡುತ್ತದೆ. ಪಾಠ ಪ್ರವಚನದೊಂದಿಗೆ ಸಾಮಾಜಿಕ ಮೌಲ್ಯಗಳಿಗೆ ಗೌರವ ಸೂಚಿಸಿ ಉತ್ತಮ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗುವಂತೆ ನರಿಯಂದಡ ಗ್ರಾಮ ಪಂಚಾಯಿತಿ ಚೆಯ್ಯಂಡಾಣೆ ಅಧ್ಯಕ್ಷರಾದ ಪೆಮ್ಮಂಡ ಕೌಶಿ ಕಾವೇರಮ್ಮ ಅವರು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ಕೊಡಗು ವಿಶ್ವವಿದ್ಯಾನಿಲಯ,ಕಾವೇರಿ ಕಾಲೇಜು ವಿರಾಜಪೇಟೆ ಆಶ್ರಯದಲ್ಲಿ ಕಡಂಗ ಅರಪಟ್ಟು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಮಾತನಾಡಿದ ಕೌಶಿ ಕಾವೇರಮ್ಮ ಅವರು, ಸಮಾಜದ ಅಭಿವೃದ್ದಿಗೆ ಯುವ ಸಮೂಹವು ಪೂರಕವಾಗಿ ಪ್ರತಿಸ್ಪಂದಿಸಬೇಕು. ಕಾಲೇಜು ಶಿಕ್ಷಣದಲ್ಲಿ ಪಠ್ಯ ಪುಸ್ತಕದಲ್ಲಿರುವ ತಿರುಳು ಮತ್ತು ಮಾಹಿತಿ ತಿಳಿದುಕೊಂಡಲ್ಲಿ ಸಾಲದು ಬಾಹ್ಯವಾದ ಚಿಂತನೆಗಳ ಬಗ್ಗೆ ಪರಿಜ್ಞಾನದ ಅರಿವು ಹೊಂದುವುದು ಮುಖ್ಯ. ಪೋಷಕರು ಮತ್ತು ಶಿಕ್ಷಕರ ಒತ್ತಡಕ್ಕೆ ಮಣಿದು ಒದುವುದು ಮುಖ್ಯವಾಗಬಾರದು ಬದಲಿಗೆ ಆತ್ಮಗೌರವ ಶಿಕ್ಷಣದ ಹಂಬಲದೊಂದಿಗೆ ಒದುವುದು ಮುಖ್ಯವಾಗಬೇಕು. ಪ್ರಸ್ತುತ ಕಾಲಗಟ್ಟದಲ್ಲಿ ಯುವ ಸಮುದಾಯವು ಮೊಬೈಲ್ ವ್ಯಮೋಹಕ್ಕೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಒಳ್ಳೆಯದು ಕೆಟ್ಟದ್ದು ಅಡಕವಾಗಿದೆ. ಆದರೆ ಆಯ್ಕೆ ಉತ್ತಮ ಹವ್ಯಾಸಕ್ಕೆ, ಜೀವನಕ್ಕೆ ಮಾದರಿಯಾಗುವ ವಿಷಯಗಳಿಗೆ ಸೀಮಿತವಾಗಬೇಕು. ಶಿಬಿರದಲ್ಲಿ ಲಭಿಸುವ ಮಾಹಿತಿಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗುವಂತೆ ಕರೆ ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸಿ ಧ್ವಜರೋಹಣಗೈದು ಮಾತನಾಡಿದ ನರಿಯಂದಡ ಗ್ರಾಮ ಪಂಚಾಯಿತಿ ಚೆಯ್ಯಂಡಾಣೆ ಉಪಾಧ್ಯಕ್ಷರಾದ ಕೋಡಿರ ಎಂ. ವಿನೋದ್ ನಾಣಯ್ಯ , ಶಿಸ್ತು, ಸಂಯಮ, ನಡತೆ ಹಾಗೂ ನಾಯಕತ್ವ ಕಲಿಯಲು ಶಿಬಿರಗಳು ಉತ್ತಮ ವೇದಿಕೆಯಾಗಿದೆ.ಶಿಬಿರದಲ್ಲಿ ಕಲಿಯುವ ಪ್ರತಿಯೊಂದು ವಿಷಯಗಳು ಜೀವನ ಸುಧಾರಣೆಯ ಅಂಶಗಳಾಗಿವೆ. ಇವುಗಳು ಶಿಬಿರಕ್ಕೆ ಮಾತ್ರ ಸಿಮಿತವಾಗದೆ ಜೀವನದ ಸಂಗಾತಿಗಳಾಗಬೇಕು. ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಉತ್ತಮ ನಾಯಕತ್ವದ ಗುಣಮೌಲ್ಯಯುತವಾದ ಮಾಹಿತಗಳನ್ನು ಕಲಿಸುತ್ತದೆ. ನೀತಿ ಪಾಠದಂತೆ ಜೀವನದಲ್ಲಿ ರೂಡಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ನಾಯಕನಾಗಿ ಬೆಳೆಯುವ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ಹೇಳಿದರು.
ಎಡಪಾಲ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕರು ಮತ್ತು ರಾಜ್ಯ ಪ್ರಶಸ್ತಿ ವಿಜೇತರಾದ ಕೆ.ಎ. ಉಮ್ಮರ್ ಅವರು ಮಾತನಾಡಿಣ ಸಮಾಜಿಕ ಪರಿಕಲ್ಪನೆ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಶಿಸ್ತುಬದ್ದ ಜೀವನದಿಂದ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ಗುಣಗಾಣಲು ಸಾಧ್ಯ. ಸಮಾಜದಲ್ಲಿ ನಡೆಯುವ ಭ್ರಷ್ಟಚಾರ, ಅಹಿಂಸೆ, ಮಾದಕ ವಸ್ತುಗಳ ಉಪಯೋಗ, ಸಾಮಾಜಿಕ ಪಿಡುಗುಗಳು ದೈನಂದಿನ ಸಮಾಜವನ್ನು ವಿನಾಶಕ್ಕೆ ದೂಡುತ್ತಿದೆ. ಇವುಗಳ ವಿರುದ್ದ ಸಮರ ಸಾರುವ ಗುರಿಯತ್ತಾ ವಿದ್ಯಾರ್ಥಿಗಳು ಮುಂದಾಗಬೇಕು. ಶಿಬಿರಗಳ ಆಯೋಜನೆಯಿಂದಾಗಿ ಗ್ರಾಮಗಳ ಅಭಿವೃದ್ದಿಗೆ ಪೂಕರವಾಗಿರುತ್ತದೆ. ವಿಕಸಿತ ಭೌವ್ಯ ಭಾರತದ ಕಲ್ಪನೆಯು ಸಕಾರವಾಗಬೇಕಾದರೆ ಯುವ ಸಮುದಾಯವು ಒಂದಾಗಿ ಸಂಘಟಿತರಾಗಿ ಅಭಿವೃದ್ದಿಗೆ ಕೈಜೋಡಿಸುವಂತಾಗಬೇಕು ಎಂದು ಹೇಳಿದರು.
ಕಾವೇರಿ ಕಾಲೇಜು ವಿರಾಜಪೇಟೆ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ವಚನ ಭೊದಿಸಿ ಮಾತನಾಡಿದರು. ಸ.ಹಿ.ಪ್ರಾ. ಶಾಲೆ ಅರಪಟ್ಟು ಕಡಂಗ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಭವ್ಯಶ್ರೀ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಅರಪಟ್ಟು ಕಡಂಗ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕರಾದ ವತ್ಸಲ ಶ್ರೀಶ, ಕಾವೇರಿ ಕಾಲೇಜು ಕನ್ನಡ ಉಪನ್ಯಾಸಕರು ಮತ್ತು ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಸುನೀಲ್ ಕುಮಾರ್ ಬಿ.ಬಿ. ಉಪಸ್ಥಿತರಿದ್ದರು.
ಕಾವೇರಿ ಕಾಲೇಜು ವಿರಾಜಪೇಟೆ ಉಪನ್ಯಾಸಕರಾದ ನಿರ್ಮಿತಾ ಅವರು ಸ್ವಾಗತಿಸಿ ವಿದ್ಯಾರ್ಥಿನಿ ರಮ್ಯ ನಿರೂಪಿಸಿ ಉಪನ್ಯಾಸಕರಾದ ಮಾಣಿಕ್ಯ ಅವರು ಸರ್ವರನ್ನು ವಂದಿಸಿದರು. ಕಾವೇರಿ ಕಾಲೇಜು ವಿರಜಪೇಟೆ ಉಪನ್ಯಾಸಕರುಗಳಾದ ಡಾ. ವೀಣಾ, ಪ್ರೀಯ ಮುದ್ದಪ್ಪ, ಮಾಣಿಕ್ಯ, ನಿರ್ಮಿತಾ ಮತ್ತು ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡಂಡ ರಾಣಿ ಗಣಪತಿ, ನಂಬಿಯಪಂಡ ವಾಣಿ ತಮ್ಮಯ್ಯ ಸೇರಿದಂತೆ ಎನ್.ಎಸ್.ಎಸ್ ಘಟಕದ ಶಿಬಿರಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.