ಮರಂದೋಡ ಗೌಡ ಸಮಾಜ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ನೀಡಿದ ಸಮಾಜ ಸೇವಕ‌ ಎಡಿಕೇರಿ ಪ್ರಸನ್ನ

Apr 14, 2026 - 10:55
 0  323
ಮರಂದೋಡ ಗೌಡ ಸಮಾಜ ಕಟ್ಟಡ ನಿರ್ಮಾಣಕ್ಕೆ  ಧನಸಹಾಯ ನೀಡಿದ ಸಮಾಜ ಸೇವಕ‌ ಎಡಿಕೇರಿ ಪ್ರಸನ್ನ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಸಮೀಪದ ಮರಂದೋಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಗೌಡ ಸಮಾಜಕ್ಕೆ ಸಮಾಜ ಸೇವಕ ಹಾಗೂ ಉದ್ಯಮಿ ಎಡಿಕೇರಿ ಪ್ರಸನ್ನನವರು ಭೇಟಿ ನೀಡಿ ಗೌಡ ಸಮಾಜದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಕಟ್ಟಡ ಕಾಮಗಾರಿಗೆ ಧನ ಸಹಾಯವನ್ನು ನೀಡಿದರು.

 ಗೌಡ ಸಮಾಜದ ಕಟ್ಟಡ ನಿರ್ಮಾಣದ ಕಾಮಗಾರಿಗೆ ಮೊದಲ ಹಂತವಾಗಿ 50,000 ಸಾವಿರ ರೂಗಳ ಚೆಕ್ ಅನ್ನು ಸಮಾಜದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದ್ದು ಮುಂದಿನ ಕಾಮಗಾರಿಗಳಿಗೆ ಸಹಾಯ ಮಾಡುವುದಾಗಿ ಪ್ರಸನ್ನ ಭರವಸೆ ನೀಡಿದರು.

ಇದೆ ಸಂದರ್ಭ ಸಮಾಜ ಸೇವಕರಾದ ಎಡಿಕೇರಿ ಪ್ರಸನ್ನನವರಿಗೆ ಸಮಿತಿ ಹಾಗೂ ಊರಿನ ಗೌಡ ಬಾಂಧವರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೌಡ ಸಮಾಜದ ಅಧ್ಯಕ್ಷರಾದ ಪೊನ್ನಪ್ಪ,ಕಾರ್ಯದರ್ಶಿ ರೋಷನ್,ಕೋಶಾಧಿಕಾರಿ ದಿಲೀಪ್,ನಿರ್ದೇಶಕರುಗಳಾದರ ರ್‍ಯಾಲಿ ಗಣಪತಿ, ಪ್ರವೀಣ್,ಮಂಜು,ಮಹೇಶ್, ಚೇತನ್,ಎಡಿಕೇರಿ ಅಯ್ಯಣ್ಣ,ಎಡಿಕೇರಿ ರಾಜೇಶ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0