ವಿರಾಜಪೇಟೆಯಲ್ಲಿ ಶಾಸಕರ ಪ್ರತಿಕೃತಿ ದಹನ ಪ್ರಕರಣ : ಮೊಕದ್ದಮೆ ರದ್ದು
admincoorgdaily

ಮಡಿಕೇರಿ, ಜೂ. 20: 2024ರಲ್ಲಿ ವೀರಾಜಪೇಟೆಯಲ್ಲಿ ಶಾಸಕರ ಪ್ರತಿಕೃತಿ ದಹನದ ಪ್ರತಿಭಟನೆಗೆ ಸಂಬಂಧಿಸಿದಂತೆ 30 ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಪಡಿಸಿದೆ. ವಿರೋಧ ಪಕ್ಷವಾಗಿ ಪ್ರತಿಭಟನೆ ಮಾಡುವುದು ಸಂವಿಧಾನಿಕ ಹಕ್ಕು ಎಂದು ನ್ಯಾಯಲಯ ತೀರ್ಪು ಪ್ರಕಟಿಸಿದೆ. ವಕೀಲರಾದ ಅರುಣ ಶ್ಯಾಮ್, ನಿಶಾಂತ್ ಕುಶಾಲಪ್ಪ, ಸುಯೋಗ್ ಹೆರಳೆ, ಋತಿಕ್ ವೈ.ಎಂ. ಕಾರ್ಯಕರ್ತರ ಪರ ವಾದ ಮಂಡಿಸಿದ್ದರು.